ಶ್ರೀರಂಗಪಟ್ಟಣದಲ್ಲಿ `ಬೆಳ್ಳಿ`
Posted date: 17 Tue, Jun 2014 – 11:49:29 PM

ಯಶಸ್ವಿನಿ ಸಿನಿ ಕ್ರಿಯೆಷನ್ಸ್ ಲಾಂಛನದಲ್ಲಿ ಹೆಚ್.ಆರ್.ರಾಜೇಶ್ ಅವರು ನಿರ್ಮಿಸುತ್ತಿರುವ ‘ಬೆಳ್ಳಿ ಚಿತ್ರಕ್ಕೆ ಶ್ರೀರಂಗಪಟ್ಟಣದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಆದಿಲೋಕೇಶ್, ಸುಧಾರಾಣಿ, ವೆಂಕಟೇಶ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.  
ಮಹೇಶ್(ಮುಸ್ಸಂಜೆಮಾತು) ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಶ್ರೀಧರ್ ಸಂಗೀತ ನೀಡುತ್ತಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ಗಣೇಶ್ ಸಾಹಸ ನಿರ್ದೇಶನ, ಎ.ಹರ್ಷ, ಆದಿಲ್ ಶೇಖ್, ಮುರಳಿ ನೃತ್ಯ ನಿರ್ದೇಶನ ಹಾಗೂ ಸೀನು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಸೆಂಚುರಿ ಸ್ಟಾರ್ ಶಿವರಾಜಕುಮಾರ್, ಕೃತಿ ಖರಬಂದ, ವಿನೋದ್‌ಪ್ರಭಾಕರ್, ದೀಪಕ್, ಒರಟ ಪ್ರಶಾಂತ್, ವೆಂಕಟೇಶ್, ಆದಿಲೋಕೇಶ್, ಪದ್ಮಾವಾಸಂತಿ, ಬಿ.ವಿ.ರಾಧಾ, ಶ್ರೀನಿವಾಸಮೂರ್ತಿ, ರಮೇಶ್‌ಭಟ್, ಸುಧಾರಾಣಿ, ನಾಗರಾಜ್, ಹರೀಶ್ ರೈ, ಲೋಕಿ, ನೀನಾಸಂ ಮಂಜು, ಭಾಸ್ಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅರವಿಂದ್‌ರಾವ್ ಕಾರ್ಯಕಾರಿ ನಿರ್ಮಾಪಕರಾಗಿರುವ ‘ಬೆಳ್ಳಿ‘ ಚಿತ್ರಕ್ಕೆ ಕೆ.ಜೆ.ರಾಜಶೇಖರ್ ಸಹ ನಿರ್ಮಾಪಕರಾಗಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed